ಮುಚ್ಚಿ

ಪ್ರವಾಸಿ ಸ್ಥಳಗಳು

ಫಿಲ್ಟರ್:

ಕಾರಂಜಾ ಅಣೆಕಟ್ಟು

ಕಾರಂಜಾ ನೀರಾವರಿ ಯೋಜನೆಯು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ಗೋದಾವರಿ ಜಲಾಯನ ಪ್ರದೇಶದಲ್ಲಿ ಮಾಂಜ್ರಾ ನದಿಯ ಉಪನದಿಯಾದ ಕಾರಂಜಾ ನದಿಗೆ ಅಡ್ಡಲಾಗಿ ಇದೆ. ಇದು ಬಲ ಮತ್ತು ಎಡದಂಡೆಗಳೆರಡರಲ್ಲೂ ಕಾಲುವೆಗಳನ್ನು ಹೊಂದಿದೆ. ಬಲದಂಡೆ ಕಾಲುವೆಯ ಒಟ್ಟು ಉದ್ದ 131 ಕಿಮೀ ಮತ್ತು ಎಡದಂಡೆ ಕಾಲುವೆಯ ಉದ್ದ 31ಕಿಮೀ. ಈ ಯೋಜನೆಯು ಭಾಲ್ಕಿ ಮತ್ತು ಬೀದರ ತಾಲೂಕುಗಳಲ್ಲಿ 29227 ಹೆಕ್ಟೇರ್ ಪ್ರದೇಶಕ್ಕೆ (ಅಅಂ) ನಿರಾವರಿಯನ್ನು ಬಲ ಮತ್ತು ಎಡದಂಡೆಗಳ ಎರಡೂ ಕಾಲುವೆಗಳಿಂದ ಹಾಗೂ ಮುಂದಡ ಮತ್ತು ಹಿಂದಡದ ಲಿಫ್ಟ್ ನೀರಾವರಿ ಯೋಜನೆಗಳಿಂದ ಕಲ್ಪಿಸುತ್ತದೆ.

ಬೀದರಿನಲ್ಲಿರುವ ಪಾಪನಾಶ ಶಿವ ದೇವಾಲಯ

ಸ್ಥಳೀಯ ಸಾಂಪ್ರದಾಯಿಕ ಮಾತುಗಳ ಪ್ರಕಾರ, ಈ ದೇವಾಲಯದಲ್ಲಿರುವ ಶಿವಲಿಂಗ ಮೂರ್ತಿಯು ಶ್ರೀರಾಮನು ಲಂಕಾದಿಂದ ಹಿಂದಿರುಗುವ ಸಮಯದಲ್ಲಿ ಸ್ಥಾಪಿಸಿದವುಗಳಲ್ಲಿ ಒಂದಾಗಿದೆ. ಕಣಿವೆಯಲ್ಲಿರುವ ದೇವಾಲಯದ ಸ್ಥಳವು ಕಣ್ಣಿಗೆ ಮೋಡಿಮಾಡುತ್ತದೆ. ಪ್ರತಿ ವರ್ಷ ಶಿವರಾತ್ರಿಯ ಸಮಯದಲ್ಲಿ ಈ ಸ್ಥಳಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ದೇವಾಲಯದ ಮುಂಭಾಗದಲ್ಲಿರುವ ಕೊಳದಲ್ಲಿ ನೈಸರ್ಗಿಕ ಚಿಲುಮೆಯು ಹರಿಯುತ್ತದೆ, ಇದನ್ನು “ಪಾಪನಾಶ” ಎಂದು ಕರೆಯಲಾಗುತ್ತದೆ.

ಗುರುನಾನಕ್ ಝಿರಾ, ಬೀದರ

ಗುರುದ್ವಾರ ಬೀದರ ಸಿಖ್ಖರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಪ್ರತಿ ವರ್ಷ ಈ ಸ್ಥಳವು ದೇಶದ ಎಲ್ಲಾ ಭಾಗಗಳಿಂದ ವಿಶೇಷವಾಗಿ ನವೆಂಬರ ಮತ್ತು ಮಾರ್ಚ್ ತಿಂಗಳುಗಳಲ್ಲಿ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ. ದಂತಕಥೆಯ ಪ್ರಕಾರ, ಭೂಮಿ ಬರಗಾಲದ ಹಿಡಿತದಲ್ಲಿದ್ದಾಗ ಸಂತ ಗುರುನಾನಕ್ ಅರಮನೆಗೆ ಭೇಟಿ ನೀಡಿದರು, ಗುರುಗಳು ಸ್ಥಳೀಯರ ಕೋರಿಕೆಯ ಮೇರೆಗೆ ಪವಾಡವನ್ನು ಮಾಡಿದರು ಮತ್ತು ಕೆಂಪು ಕಲ್ಲು ಪರ್ವತದಿಂದ ನೀರಿನ ಬುಗ್ಗೆ ಸ್ಫೋಟಗೊಂಡಿತು. ಈ ದಿನದವರೆಗು ಕೆಂಪು ಕಲ್ಲು ಒರತೆಯಿಂದ ಸ್ಪಟಿಕ ಶುದ್ದ ನೀರು ಹರಿಯುತ್ತದೆ. ಈ ನೀರನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ.

ಅನುಭವ ಮಂಟಪ

ಅನುಭವ ಮಂಟಪವು ಮನುಕುಲದ ಇತಿಹಾಸದಲ್ಲಿ ಮೊದಲ ಸಂಸತ್ತು. ಅಸಾಧಾರಣ ಸಾಧನೆಯ ಮಹಾನ್ ಯೋಗಿ ಪ್ರಭುದೇವರು ಅಧ್ಯಕ್ಷರಾಗಿದ್ದರು ಮತ್ತು ಬಸವ ದೇವರ ಮುಂದಾಳತ್ವದಲ್ಲಿ ಕಾರ್ಯನಿರ್ವಹಿಸಲಾಯಿತು. ವಚನ ಸಾಹಿತ್ಯದ ಸಂಪಾದಕರಾಗಿ ಕೆಲಸ ಮಾಡುವಾಗ ಚನ್ನಬಸವಣ್ಣ ಅವರನ್ನು ಸಭಾಪತಿಗೆ ಹೋಲಿಸಬಹುದು. ಮಂಟಪದ ಸದಸ್ಯರು ಮತ್ತು ಧರ್ಮದ ಅನುಯಾಯಿಗಳಿಗೆ ಚಿಂತನೆ, ವಾಕ್ ಮತ್ತು ಕ್ರಿಯೆಯ ಸಂಪೂರ್ಣ ಸ್ವಾತಂತ್ರ್ಯವನ್ನು ನಿಡಲಾಯಿತು. ಸಭೆಯ ಮುಂದೆ ಅವುಗಳನ್ನು ಪರಿಹರಿಸಲು ಯಾವುದೇ ಪ್ರಶ್ನೆಗಳನ್ನು ಅಥವಾ ಸಂದೇಹಗಳನ್ನು ಹಾಕಲು ಅವರಿಗೆ ಅವಕಾಶ ನೀಡಲಾಯಿತು ಮತ್ತು ಸದನದಲ್ಲಿ ನಡೆಯುತ್ತಿರುವ ಸಂವಾದಗಳನ್ನು ದಾಖಲುಗೊಳಿಸಲು ಮತ್ತು ಸಂರಕ್ಷಿಸಲು ವ್ಯವಸ್ಥಿತ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಯಿತು.

ಮೈಲಾರ್ ಮಲ್ಲಣ್ಣ ದೇವಸ್ಥಾನ

ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನವು ಶಿವನ ಇನ್ನೊಂದು ರೂಪವಾದ ಖಂಡೋಬಾ ದೇವರಿಗೆ ಸಮರ್ಪಿತವಾಗಿದೆ. ಶಿವನ ಈ ಅವತಾರವನ್ನು ಶಾಸ್ತ್ರೀಯವಾಗಿ ಮಾರ್ತಾಂಡ ಭೈರವ ಎಂದು ಕರೆಯಲಾಗುತ್ತದೆ. ಮತ್ತು ಅನೇಕ ಇತರ ಹೆಸರುಗಳಲ್ಲಿ ಖಂಡೋಬಾ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಮಾರ್ತಾಂಡ ಭೈರವನನ್ನು ಚಿನ್ನ ಮತ್ತು ಸೂರ್ಯನಂತೆ ಹೊಳೆಯುತ್ತಿರುವಂತೆ ವಿವರಿಸಲಾಗಿದೆ. ಅರಿಶಿನದಿಂದ ಮುಚ್ಚಲ್ಪಟ್ಟಿದೆ. ಅವನ ಹಣೆಯ ಮೇಲೆ ಮೂರು ಕಣ್ಣುಗಳು, ಅರ್ಧಚಂದ್ರವಿದೆ. ಈ ದೇವಾಲಯದ ಪ್ರಧಾನ ಅರ್ಚಕ ಕುರುಬ ಸಮುದಾಯಕ್ಕೆ ಸೇರಿದವರು.

ಪಾಪ್ನಾಶ್ ಶಿವ ದೇವಾಲಯ ಬೀದರ್
ಪಾಪ್ನಾಶ್ ಶಿವ ದೇವಸ್ಥಾನ

ಪಾಪ್ನಾಶ್ ದೇವಾಲಯವು ಕರ್ನಾಟಕದ ಬೀದರ್ ಜಿಲ್ಲೆಯಲ್ಲಿರುವ ಶಿವ ದೇವಾಲಯವಾಗಿದೆ. ಅಯೋಧ್ಯಾಕ್ಕೆ ಹಿಂದಿರುಗಿದ ಮೇಲೆ ದೇವಸ್ಥಾನದ ವಿಗ್ರಹವನ್ನು ರಾಮನು ಸ್ಥಾಪಿಸಿದನೆಂದು ನಂಬಲಾಗಿದೆ. ಮೂಲ ದೇವಸ್ಥಾನವು ಕಳೆದುಹೋಯಿತು ಮತ್ತು ಪ್ರಾಚೀನ…

ಬೀದರ್ ಕೋಟೆ ಪ್ರವೇಶ
ಬೀದರ್ ಕೋಟೆ

ಬೀದರ್ ಕೋಟೆ ಭಾರತದ ಕರ್ನಾಟಕದ ಉತ್ತರ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ. ಕೋಟೆ, ನಗರ ಮತ್ತು ಜಿಲ್ಲೆಯನ್ನು ಎಲ್ಲಾ ಬೀದರ್ ಎಂಬ ಹೆಸರಿನೊಂದಿಗೆ ಜೋಡಿಸಲಾಗುತ್ತದೆ. ಬಹಮನಿದ್ ರಾಜವಂಶದ ಸುಲ್ತಾನ್…

ಗುರು ನಾನಕ್ ಝಿರಾ
ಗುರುನಾನಕ್ ಝೀರಾ, ಬೀದರ

ಗುರುದ್ವಾರ ಬೀದರ ಸಿಖ್ಖರ ಪವಿತ್ರ ಸ್ಥಳಗಳಲ್ಲೊಂದಾಗಿದೆ. ಈ ಸ್ಥಳವು ಪ್ರತಿ ವರ್ಷವೂ ದೇಶದ ನಾನಾ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ನವೆಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ಆಗಮಿಸುತ್ತಾರೆ….