ನ್ಯಾಯಾಲಯಗಳು
ಬೀದರ ನ್ಯಾಯಾಲಯದ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ ….
ಇತಿಹಾಸ
ಜಿಲ್ಲಾ ಮತ್ತು ಸತ್ರ ನ್ಯಾಯಲಯ, ಬೀದರ ನಗರದ ಪ್ರಮುಖ ಪ್ರದೇಶದಲ್ಲಿದೆ. ನ್ಯಾಯಲಯ ಕಟ್ಟಡವನ್ನು ಹೈದರಾಬಾದಿನ ನಿಜಾಮ್ ಅವಧಿಯಲ್ಲಿ 1328 ರಲ್ಲಿ ನಿರ್ಮಿಸಿಸಲಾಗಿದೆ. ಅಂದರೆ ಇದು ಕ್ರಿ.ಶ. 1938 ಕ್ಕೆ ಅನುರೂಪವಾಗಿದೆ. ಇದನ್ನು ಪರಂಪರೆ ಕಟ್ಟಡ ಎಂದು ಘೋಷಿಸಲಾಗಿದೆ. 1956 ರ ರಾಜ್ಯ ಪುನರ್ ವಿಂಗಡನೆಯ ಪೂರ್ವದಲ್ಲಿ ಬೀದರ ಜಿಲ್ಲೆಯಲ್ಲಿ ಹದಿಮೂರು ತಾಲೂಕುಗಳು ಸೇರಿದ್ದವು. ಪುನರ್ ವಿಂಗಡನೆಯ ನಂತರ, ಈ ಜಿಲ್ಲೆಯಲ್ಲಿ ತಾಲ್ಲೂಕುಗಳ ಸಂಖ್ಯೆ ಐದು ಆಗಿದೆ. ಅವು ಬೀದರ, ಔರಾದ್ (ಬಿ), ಬಸವಕಲ್ಯಾಣ, ಭಾಲ್ಕಿ ಮತ್ತು ಹುಮನಾಬಾದ ತಾಲೂಕುಗಳಾಗಿವೆ.
ಬೀದರ ನ್ಯಾಯಾಂಗ ಘಟಕವು ಈ ಕೆಳಕಂಡ ನ್ಯಾಯಾಲಯಗಳನ್ನು ಹೊಂದಿರುತ್ತದೆ.
- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಬೀದರ.
- ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಬೀದರ.
- ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ನ್ಯಾಯಲಯಗಳ ನ್ಯಾಯಂಗ ದಂಡಾಧಿಕಾರಿಗಳು (ಸಿಜೆಎಂ) ಬೀದರ.
- ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ನ್ಯಾಯಲಯಗಳ ನ್ಯಾಯಂಗ ದಂಡಾಧಿಕಾರಿಗಳು (ಸಿಜೆಎಂ) ಬೀದರ.
- ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿಗಳು (ಜೆಎಂಎಫ್ಸಿ) II, ಬೀದರ.
- ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿಗಳು (ಜೆಎಂಎಫ್ಸಿ) ಬೀದರ.
- ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿಗಳು (ಜೆಎಂಎಫ್ಸಿ) ಬೀದರ.
ಔರಾದ (ಬಿ)
- ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿಗಳು (ಜೆಎಂಎಫ್ಸಿ) II, ಔರಾದ್ (ಬಿ).
- ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ನ್ಯಾಯಲಯಗಳ ನ್ಯಾಯಂಗ ದಂಡಾಧಿಕಾರಿಗಳು (ಸಿಜೆಎಂ) ಬೀದರ. (ಸೋಮವಾರ ಮತ್ತು ಮಂಗಳವಾರ ಕಾರ್ಯನಿರ್ವಹಣೆ)
ಭಾಲ್ಕಿ
- ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಬೀದರ (ಶುಕ್ರವಾರ ಮತ್ತು ಶನಿವಾರದಂದು ಕಾರ್ಯನಿರ್ವಹಣೆ)
- ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ನ್ಯಾಯಲಯಗಳ ನ್ಯಾಯಂಗ ದಂಡಾಧಿಕಾರಿಗಳು (ಸಿಜೆಎಂ) ಭಾಲ್ಕಿ.
- ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿಗಳು (ಜೆಎಂಎಫ್ಸಿ) ಭಾಲ್ಕಿ.
ಬಸವಕಲ್ಯಾಣ
- ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ II, ಬೀದರ, ಬಸವಕಲ್ಯಾಣದಲ್ಲಿ ಕಾರ್ಯನಿರ್ವಹಣೆ.
- ಹಿರಿಯ ಸಿವಿಲ್ ನ್ಯಾಯಾಧೀಶ ಬಸವಕಲ್ಯಾಣ.
- ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿಗಳು (ಜೆಎಂಎಫ್ಸಿ) ಬಸವಕಲ್ಯಾಣ.
ಹುಮನಾಬಾದ
- ಹಿರಿಯ ಸಿವಿಲ್ ನ್ಯಾಯಾಧೀಶ ಬಸವಕಲ್ಯಾಣ.
- ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿಗಳು (ಜೆಎಂಎಫ್ಸಿ) ಹುಮನಾಬಾದ.
- ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿಗಳು (ಜೆಎಂಎಫ್ಸಿ) ಹುಮನಾಬಾದ.
ನ್ಯಾಯಾಂಗ ವ್ಯಾಪ್ತಿ
ಪ್ರಸ್ತುತ ಬೀದರ 5448 ಚದರ ಕಿಲೋಮೀಟರನಷ್ಟು ವಿಸ್ತಾರವನ್ನು ಹೊಂದಿದೆ. 17 ಡಿಗ್ರಿ 35 ನಿಮಿಷ ಮತ್ತು 18 ಡಿಗ್ರಿ 25 ನಿಮಿಷ ಉತ್ತರ ಅಕ್ಷಾಂಶಗಳು ಮತ್ತು 760 42 ನಿಮಿಷಗಳು ಮತ್ತು 770 39 ನಿಮಿಷಗಳು ಪೂರ್ವ ರೇಖಾಂಶಗಳಿಂದ ಕೂಡಿದೆ. ಜಿಲ್ಲೆಯ ಪೂರ್ವದಲ್ಲಿ ತೆಲಂಗಾಣ ರಾಜ್ಯದ ನಿಜಾಮಾಬಾದ್ ಮತ್ತು ಮೇದಕ್ ಜಿಲ್ಲೆಯಿದ್ದು ಪಶ್ಚಿಮದಲ್ಲಿ ಮಹಾರಾಷ್ಟ್ರದ ನಾಂದೇಡ್ ಮತ್ತು ಉಸ್ಮಾಬಾದ್ ಜಿಲ್ಲೆಗಳನ್ನು ಹೊಂದಿದೆ. ದಕ್ಷಿಣದಲ್ಲಿ ಕರ್ನಾಟಕದ ಕಲಬುರಗಿ ಜಿಲ್ಲೆಯಿದೆ. ಬೀದರಿಗೆ ದಖ್ಖನ್ದಲ್ಲಿನ ಈ ಕೇಂದ್ರಸ್ಥಾನವು ದೀರ್ಘಕಾಲ ನೀಡಲ್ಪಟ್ಟಿತು, ಇದು ದಖ್ಖನ ಇತಿಹಾಸದಲ್ಲಿ ಪೂರ್ವ-ಶ್ರೇಷ್ಠವಾದ ಸ್ಥಾನವನ್ನು ಹೊಂದಿದ್ದರೂ, ಇಂದು ಶತಮಾನಗಳ ನಿರ್ಲಕ್ಷ್ಯ ಮತ್ತು ನಾಶದ ಚಿತ್ರವನ್ನು ಒದಗಿಸುತ್ತಿದೆ.
ಮೂಲಸೌಕರ್ಯ
- ಕಂಪ್ಯೂಟರ್ ಸರ್ವರ್ ಕೊಠಡಿ.
- ನ್ಯಾಯಾಂಗ ಸೇವಾ ಕೇಂದ್ರ.
- ವಿಡಿಯೋಕಾನ್ಫರೆನ್ಸ್ ಹಾಲ್.
- ಮಾಧ್ಯಮ (ಮೇಡಿಯೇಶನ) ಕೇಂದ್ರ.
- ಭರ್ತಿ ಮತ್ತು ವಿಚಾರಣೆ ಕೌಂಟರ್ (ಮಾರ್ಚ್ 2003 ರಿಂದ ಕಾರ್ಯನಿರ್ವಹಿಸುತ್ತದೆ).