ಜಿಲ್ಲೆಯ ಬಗ್ಗೆ
ಇತಿಹಾಸ
ಬೀದರ ಎಂಬ ಹೆಸರು ‘ಬಿದಿರು’ ಎಂಬ ಪದದಿಂದ ಹುಟ್ಟಿಕೊಂಡಿದೆ. ಈ ಸ್ಥಳವು ಹಿಂದೆ ಬಿದಿರು ಸಮೂಹಗಳಿಗೆ ಹೆಸರುವಾಸಿಯಾಗಿದೆಯೆಂದು ತಿಳಿದುಬಂದಿದೆ. ಬಿದರೂರು> ಬಿದರೆ> ‘ಬೀದರ’ ಎಂದು ಕರೆಯಲ್ಪಡುತ್ತಿತ್ತು. ಬೀದರ ಮೂಲದ ಇತರ ರೂಪಗಳಿದ್ದರೂ, ಬಿದರೂರು ಎಂಬ ಹೆಸರು ಹೆಚ್ಚು ಹತ್ತಿರದಲ್ಲಿದೆ ಮತ್ತು ಸಮಕಾಲೀನ ಸಾಹಿತ್ಯ ಕೃತಿಗಳಿಂದ ದೃಢೀಕರಿಸಲ್ಪಟ್ಟಿದೆ. ಬೀದರ ಎಂಬುದು ಭಾರತದ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಕರ್ನಾಟಕದ ಈಶಾನ್ಯ ಭಾಗದಲ್ಲಿ ನೆಲೆಗೊಂಡಿದೆ. ಇದು ಬೀದರ ಜಿಲ್ಲೆಯ ಪ್ರಧಾನ ಕಛೇರಿಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 700 ಕಿ.ಮೀ (430 ಮೈಲಿ) ದೂರದಲ್ಲಿದೆ, ಇದು ಬಹಳ ಹಿಂದೆಯೇ ರಾಜ್ಯ ಸರ್ಕಾರದಿಂದ ನಿರ್ಲಕ್ಷಿಸಲ್ಪಟ್ಟಿದೆ. ಆದಾಗ್ಯೂ, ಶ್ರೀಮಂತ ಪರಂಪರೆಯನ್ನು ಹೊಂದಿರುವ ಕಾರಣದಿಂದಾಗಿ, ಭಾರತದ ಪುರಾತತ್ವ ಭೂಪಟದಲ್ಲಿ ನಗರವು ಒಂದು ಪ್ರಮುಖ ಸ್ಥಳವಾಗಿದೆ. ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಕಟ್ಟಿದ ಕೋಟೆ 500 ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದೆ ಮತ್ತು ಇನ್ನೂ ಪ್ರಬಲವಾಗಿದೆ. ಇಲಾಖೆಯಿಂದ ಪಟ್ಟಿ ಮಾಡಲ್ಪಟ್ಟ 61 ಸ್ಮಾರಕಗಳು ರಾಜ್ಯ ಇಲಾಖೆ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಪ್ರಕಟಿಸಿದ “ಬೀದರ ಹೆರಿಟೇಜ್” ಪುಸ್ತಕದ ಪ್ರಕಾರ, ಸುಮಾರು 30 ಗುಂಬಜಗಳು ಬೀದರ ನಗರದ ಸುತ್ತಲೂ ಇವೆ. ವಿಸ್ಪಿರಿಂಗ್ ಮಾನ್ಯುಮೆಂಟ್ಗಳ ನಗರವೆಂಬ ಅಡ್ಡ ಹೆಸರಿನಿಂದ ತಿಳಿಯಲ್ಪಡುತ್ತದೆ. ಬೀದರ ಮತ್ತು ಸುತ್ತಮುತ್ತಲಿರುವ ಪರಂಪರೆಯ ತಾಣಗಳು ಇತ್ತೀಚಿನ ವರ್ಷಗಳಲ್ಲಿ ಚಲನಚಿತ್ರ ಚಿತ್ರೀಕರಣಕ್ಕಾಗಿ ಪ್ರಮುಖ ಆಕರ್ಷಣೆಯಾಗಿ ಮಾರ್ಪಟ್ಟಿವೆ.
ಬೀದರಿನ ವಾಯುಪಡೆಯ ತರಬೇತಿ ಕೇಂದ್ರವು ದೇಶದಲ್ಲಿ ಎರಡನೇ ದೊಡ್ಡ ತಾಣವನಿಸಿದೆ. “ಬಿಎಇ ಹಾಕ್ ವಿಮಾನ”ದ ನಿರೀಕ್ಷಿತ ಫೈಟರ್ ಪೈಲಟ್ಗಳ ಸುಧಾರಿತ ಜೆಟ್ ತರಬೇತಿಗಾಗಿ ಬೀದರಿನ ಐಎಎಫ್ ಸ್ಟೇಷನನ್ನು ಬಳಸಲಾಗುತ್ತದೆ.
ಬೀದರ ನಗರವು ತನ್ನ ಬಿದ್ರಿ ಕರಕುಶಲ ಉತ್ಪನ್ನಗಳಿಗೆ ಮತ್ತು ಅದರ ಶ್ರೀಮಂತ ಇತಿಹಾಸಕ್ಕಾಗಿ ಹೆಸರುವಾಸಿಯಾಗಿದೆ. ಬೀದರ ಅನ್ನು ಸಿಖ್ ತೀರ್ಥಯಾತ್ರಿಗಳ ಪವಿತ್ರ ಸ್ಥಳಗಳಲ್ಲೊಂದಾಗಿ ಪರಿಗಣಿಸಲಾಗಿದೆ. ಉತ್ತರ ಕರ್ನಾಟಕದಲ್ಲಿನ ಇತರ ಸ್ಥಳಗಳಿಗಿಂತ ಭಿನ್ನವಾಗಿ, ಬೀದರ ಅತ್ಯಂತ ತಂಪಾಗಿರುವ ಮತ್ತು ಅತ್ಯಂತ ತೇವವಾದ ಸ್ಥಳವಾಗಿದೆ. 2009-10ನೇ ಸಾಲಿಗೆ, ಭಾರತದಲ್ಲಿ ಸ್ವಚ್ಛವಾದ ನಗರಗಳಲ್ಲಿ ಬೀದರ 22 ನೇ ಸ್ಥಾನವನ್ನು ಪಡೆದಿದೆ ಮತ್ತು ಕರ್ನಾಟಕದಲ್ಲಿ 5 ನೇ ಸ್ಥಾನದಲ್ಲಿದೆ. SH4 ಬೀದರ ಮೂಲಕ ಹಾದುಹೋಗುತ್ತದೆ ಮತ್ತು ಇಡೀ ನಗರವು ನಾಲ್ಕು ಲೇನ್ ರಸ್ತೆಯೊಂದಿಗೆ ಸಂಯೋಜಿಸಲ್ಪಡುತ್ತದೆ.
ನಗರದ ಪ್ರಾಚೀನ ಕರೇಜ್ ವ್ಯವಸ್ಥೆಯನ್ನು ಇತ್ತೀಚಿಗೆ ಪತ್ತೆ ಮಾಡಲಾಗಿದೆ. ಕರೇಜ್ (ಖನತ್) ನೀರಿನ ಸರಬರಾಜಿಗೆ ಭೂಗತ ಪ್ರದೇಶದ ಜಲಜಾಲವಾಗಿದೆ. 15 ನೇ ಶತಮಾನದಲ್ಲಿ ನಿರ್ಮಿಸಲಾದ ಬೀದರ ಕರೇಜ್, 21 ಗಾಳಿಕಿಂಡಿಗಳೊಂದಿಗೆ 3 ಕಿ.ಮೀ. (1.9 ಮೈಲಿ) ಉದ್ದವಾಗಿದೆ. ಭೂಗತ ಕಾಲುವೆಗಳು, ಭೂಗತ ನೀರಿನ ಹೊಳೆಗಳನ್ನು ಸಂಪರ್ಕಿಸಲು ನಿರ್ಮಿಸಲಾಗಿದೆ, ನಾಗರಿಕ ನೆಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಮತ್ತು ಬೀದರ ಕೋಟೆಯ ಒಳಗಿರುವ ಗ್ಯಾರಿಸನಯನ್ನು ನೀಡುತ್ತವೆ. ಇಲ್ಲಿನ ಮಣ್ಣು ಗಟ್ಟಿಬಂಡೆಯಿಂದ ಕೂಡಿಕೊಂಡಿರುವುದರಿಂದ ಮತ್ತು ಬಾವಿಗಳು ಕೊರೆಯಲು ಕಷ್ಟವಾಗಿದ್ದ ಕಾಲದಲ್ಲಿ ಇದು ಅಗತ್ಯವಾಗಿತ್ತು.