ಮುಚ್ಚಿ

ತಲುಪುವ ಬಗೆ

ಬೀದರ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿದ್ದು, ಬೆಂಗಳೂರಿಗೆ ವಿಮಾನ ಸಂಪರ್ಕ ಹೊಂದಿದೆ. ಇಲ್ಲಿಂದ ಹೈದರಾಬಾದ್ ವಿಮಾನ ನಿಲ್ದಾಣ 149 ಕಿಮೀ ದೂರವಿದ್ದು ಭಾರತದ ಎಲ್ಲಾ ಭಾಗಗಳಿಂದ ಮತ್ತು ವಿದೇಶಗಳಿಂದ ಅತ್ಯುತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ.

ರೈಲಿನ ಮೂಲಕ

ಬೆಂಗಳೂರು ಮತ್ತು ಹೈದರಾಬಾದಿಂದ ರೈಲು ಸೌಲಭ್ಯ ಲಭ್ಯವಿದೆ. ಯಶ್ವಂತಪುರ – ಬೀದರ ಎಕ್ಸಪ್ರೆಸ್, ಯಶ್ವಂತಪುರದಿಂದ 7:00 PM ಗಂಟೆಗೆ, ಬೆಂಗಳೂರು – ನಾಂದೇಡ್ ಲಿಂಕ್ ಎಕ್ಸಪ್ರೆಸ್ ವಾಯಾ ಬೀದರ, 9.50 PM ಗಂಟೆಗೆ, ಬೆಂಗಳೂರಿನಿಂದ ಹೊರಡುತ್ತವೆ. ಹೈದರಾಬಾದ್ ನಿರ್ಗಮನದಿಂದ ಸಿಂಕ್ರಿದ್ರಾಬಾದ್ – ಮನ್ಮಾಡ್ ಎಕ್ಸಪ್ರೆಸ್ ಹೈದರಾಬಾದ ಸಿಂಕ್ರಿದ್ರಾಬಾದ್ ನಿಲ್ದಾಣದಿಂದ ಸಂಜೆ 6 ಗಂಟೆಗೆ. ಹೈದರಾಬಾದ್ – ಔರಂಗಾಬಾದ್ ಎಕ್ಸಪ್ರೆಸ್ ಕಾಚಿಗುಡ ವಾರದಲ್ಲಿ ಮೂರು ಬಾರಿ ಇಲ್ಲಿಂದ ಸಾಗುತ್ತದೆ. ಬೆಂಗಳೂರಿನಿಂದ ಕಲಬುರಗಿ ಮಾರ್ಗವಾಗಿ ಬೆಂಗಳೂರಿನಿಂದ ಉದ್ಯಾನ ಎಕ್ಸಪ್ರೆಸ್ ಅಥವಾ ಕೆಕೆ ಎಕ್ಸಪ್ರೆಸ್ ಕೂಡಾ ಗುಲ್ಬರ್ಗಾಕ್ಕೆ ಬಂದು ಅಲ್ಲಿಂದ ಬಸ್ ಮಾರ್ಗವಾಗಿ 105 ಕಿ.ಮೀ. ಅಂತರದಲ್ಲಿ ಬೀದರ ತಲುಪಬಹುದು.

ರಸ್ತೆ ಮೂಲಕ

ಬೆಂಗಳೂರಿನಿಂದ ಹಲವಾರು ಸರ್ಕಾರಿ ಕೆ.ಎಸ್.ಆರ್.ಟಿ.ಸಿ. ಯ ಐಷಾರಾಮಿ ಬಸ್ಸುಗಳು ಹೈದರಾಬಾದ್ ಮೂಲಕ ಬೀದರಿಗೆ ತಲುಪುತ್ತವೆ. ಬೆಂಗಳೂರಿನಿಂದ ಹೈದರಾಬಾದ್ ಮೂಲಕ ಎನ್ಎಚ್ 7 ಮತ್ತು ಎನ್ಎಚ್ 9 ಮಾರ್ಗವಾಗಿ ಹದಿನಾರು ಗಂಟೆಗಳಲ್ಲಿ ಬೀದರ ತಲುಪಬಹುದು. ಹೈದರಾಬಾದಿನ ಇಮಲಿಬನ್ ಬಸ್ ನಿಲ್ದಾಣದಿಂದ ಪ್ರತಿ 15 ನಿಮಿಷಗಳಿಗೊಮ್ಮೆ ಪ್ಲಾಟ್ ಫಾರ್ಮ್ ನಂ 36 ರಿಂದ ಬೀದರಿಗೆ ಹೊರಡುತ್ತವೆ. ಬೆಂಗಳೂರಿನಿಂದ ಬಳ್ಳಾರಿ ಹಾಗೂ ಕಲಬುರಗಿ ಮಾರ್ಗವಾಗಿ ಇಪ್ಪತ್ತು ಗಂಟೆಗಳ ಪ್ರಯಾಣದ ಮೂಲಕ ಬೀದರ ತಲುಪಬಹುದು.