ಮುಚ್ಚಿ

ಜಾತಿ ಪ್ರಮಾಣಪತ್ರ

ಈ ಸೇವೆಯಲ್ಲಿ ಒಳಗೊಂಡಿರುವ ಕಾರ್ಯವಿಧಾನ ಅರ್ಜಿಯನ್ನು ನಿಗಿದಿತ ನಮೂನೆಯಲ್ಲಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಅನುಸೂಚಿತ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸಲ್ಲಿಸುವುದು. ಇತರೇ ಹಿಂದುಳಿದ ವರ್ಗಗಳಿಗೆ ಸೇರಿದವರು ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಇವರಿಗೆ ಸಲ್ಲಿಸುವುದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

 1. ತಂದೆ/ತಾಯಿ ಉದ್ಯೋಗದಲ್ಲಿದ್ದರೆ ಸೇವಾ ವಹಿಯಲ್ಲಿ ನಮೂದಾಗಿರುವಂತೆ ಜಾತಿ ವಿವರ
 2. ಅಭ್ಯರ್ಥಿಯ ಜಾತಿ ನಮೂದಾಗಿರುವ ಈ ಮೂರು ದಾಖಲಾತಿಗಳನ್ನು ಲಗತ್ತಿಸುವುದು. ಅ. ಪ್ರಾಥಮಿಕ ಶಾಲೆ ದಾಖಲಾತಿ ಆ. ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ.) ಇ. ಕ್ಯುಮಿಲೇಟಿವ್ ರೆಕಾರ್ಡ್
 3. ಅಭ್ಯರ್ಥಿಯ ಸಹೋದರ/ ಸಹೋದರಿಯರು ವ್ಯಾಸಂಗ ಮಾಡುತ್ತಿದ್ದಲ್ಲಿ ಸದರಿ ಶಾಲಾ ಕಾಲೇಜುಗಳಿಂದ ದಾಖಲಾತಿ
 4. ತಹಸೀಲ್ದಾರರು ನೀಡಿರುವ ಜಾತಿ ಪ್ರಮಾಣ ಪತ್ರ.
 5. ತಂದೆ/ತಾಯಿಯ ಜಾತಿ ಪ್ರಮಾಣ ಪತ್ರ.
 6. ತಂದೆ/ ತಾಯಿಯು ವಿದ್ಯಾಭ್ಯಾಸ ಮಾಡಿದ್ದರೆ ಶಾಲೆಯ ಟಿ.ಸಿ/ ಕುಮಿಲೇಟಿವ್ ರೆಕಾರ್ಡ್.
 7. ನೋಟರಿಯವರಿಂದ ಅಫಿಡವಿಟ್ 20 ರೂ. ಛಾಪ ಕಾಗದದಲ್ಲಿ
 8. ಭಾವಚಿತ್ರಗಳು-3
 9. ಮತದಾರರ ಗುರುತಿನ ಚೀಟಿ
 10. ವಂಶವೃಕ್ಷ
 11. ವಾಸಸ್ಥಳದ ಧೃಢೀಕರಣ ಪತ್ರ – ಕಂದಾಯ ಅಧಿಕಾರಿಗಳಿಂದ
 12. ಮೇಲ್ಕಂಡ ದಾಖಲಾತಿಗಳ ಪ್ರತಿಗಳನ್ನು ಧೃಢೀಕರಿಸಿ ಸಲ್ಲಿಸುವುದು.

ಭೇಟಿ: http://www.nadakacheri.karnataka.gov.in/

ಡಿಸಿ ಕಚೇರಿ ಬೀದರ್
ಸ್ಥಳ : ಎಲ್ಲಾ ತಹಶೀಲ್ದಾರ್ ಕಚೇರಿಗಳು | ನಗರ : ಬೀದರ್ | ಪಿನ್ ಕೋಡ್ : 585401