ಮುಚ್ಚಿ

ಬೀದರ್ ಕೋಟೆ

ನಿರ್ದೇಶನ

ಬೀದರ್ ಕೋಟೆ ಭಾರತದ ಕರ್ನಾಟಕದ ಉತ್ತರ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ. ಕೋಟೆ, ನಗರ ಮತ್ತು ಜಿಲ್ಲೆಯನ್ನು ಎಲ್ಲಾ ಬೀದರ್ ಎಂಬ ಹೆಸರಿನೊಂದಿಗೆ ಜೋಡಿಸಲಾಗುತ್ತದೆ. ಬಹಮನಿದ್ ರಾಜವಂಶದ ಸುಲ್ತಾನ್ ಅಲ್ಲ್ಲಾ-ದಿನ್ ಬಹ್ಮನ್ ತನ್ನ ರಾಜಧಾನಿಯನ್ನು ಗುಲ್ಬರ್ಗದಿಂದ 1427 ರಲ್ಲಿ ಬೀದರ್ಗೆ ಸ್ಥಳಾಂತರಿಸಿದರು ಮತ್ತು ಹಲವಾರು ಕೋಟೆಗಳ ಜೊತೆಗೆ ಇಸ್ಲಾಮಿಕ್ ಸ್ಮಾರಕಗಳನ್ನು ನಿರ್ಮಿಸಿದರು.

ಫೋಟೋ ಗ್ಯಾಲರಿ

  • ಬೀದರ್ ಕೋಟೆ ಪ್ರವೇಶ
    ಬೀದರ್ ಕೋಟೆ

ತಲುಪುವ ಬಗೆ:

ವಿಮಾನದಲ್ಲಿ

ಬೀದರ ಜಿಲ್ಲೆಯ ಮುಖ್ಯ ಕೇಂದ್ರದಿಂದ ಹೈದರಾಬಾದಿನ ಬೇಗಂಪೆಟದಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಟರ್ಮಿನಲ್, ಕೇವಲ 120 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಎರಡುವರೆ ಗಂಟೆಗಳಲ್ಲಿ ಎನ್ಎಚ್ 9 ಮೂಲಕ ಜಹೀರಾಬಾದ್ ವರೆಗೆ ಚಾಲನೆಯಾಗಿದ್ದುಕೊಂಡು ಝಹೀರಾಬಾದಿನಿಂದ ಉತ್ತರಕ್ಕೆ ನಂತರ 28 ಕಿ.ಮೀ. ಕ್ರಮಿಸುವ ಮೂಲಕ ಬೀದರ ತಲುಪಬಹುದು.

ರೈಲಿನಿಂದ

ಬೆಂಗಳೂರು ಮತ್ತು ಹೈದರಾಬಾದಿಂದ ರೈಲು ಸೌಲಭ್ಯ ಲಭ್ಯವಿದೆ. ಯಶ್ವಂತಪುರ - ಬೀದರ ಎಕ್ಸಪ್ರೆಸ್, ಯಶ್ವಂತಪುರದಿಂದ 7:00 PM ಗಂಟೆಗೆ, ಬೆಂಗಳೂರು - ನಾಂದೇಡ್ ಲಿಂಕ್ ಎಕ್ಸಪ್ರೆಸ್ ವಾಯಾ ಬೀದರ, 9.50 PM ಗಂಟೆಗೆ, ಬೆಂಗಳೂರಿನಿಂದ ಹೊರಡುತ್ತವೆ. ಹೈದರಾಬಾದ್ ನಿರ್ಗಮನದಿಂದ ಸಿಂಕ್ರಿದ್ರಾಬಾದ್ - ಮನ್ಮಾಡ್ ಎಕ್ಸಪ್ರೆಸ್ ಹೈದರಾಬಾದ ಸಿಂಕ್ರಿದ್ರಾಬಾದ್ ನಿಲ್ದಾಣದಿಂದ ಸಂಜೆ 6 ಗಂಟೆಗೆ. ಹೈದರಾಬಾದ್ - ಔರಂಗಾಬಾದ್ ಎಕ್ಸಪ್ರೆಸ್ ಕಾಚಿಗುಡ ವಾರದಲ್ಲಿ ಮೂರು ಬಾರಿ ಇಲ್ಲಿಂದ ಸಾಗುತ್ತದೆ. ಬೆಂಗಳೂರಿನಿಂದ ಗುಲ್ಬರ್ಗಾ ಮಾರ್ಗವಾಗಿ ಬೆಂಗಳೂರಿನಿಂದ ಉದ್ಯಾನ ಎಕ್ಸಪ್ರೆಸ್ ಅಥವಾ ಕೆಕೆ ಎಕ್ಸಪ್ರೆಸ್ ಕೂಡಾ ಗುಲ್ಬರ್ಗಾಕ್ಕೆ ಬಂದು ಅಲ್ಲಿಂದ ಬಸ್ ಮಾರ್ಗವಾಗಿ 105 ಕಿ.ಮೀ. ಅಂತರದಲ್ಲಿ ಬೀದರ ತಲುಪಬಹುದು.

ರಸ್ತೆ ಮೂಲಕ

ಬೆಂಗಳೂರಿನಿಂದ ಹಲವಾರು ಸರ್ಕಾರಿ ಕೆ.ಎಸ್.ಆರ್.ಟಿ.ಸಿ.ಯ ಐಷಾರಾಮಿ ಬಸ್ಗಳು ಹೈದರಾಬಾದ್ ಮೂಲಕ ಬೀದರಿಗೆ ತಲುಪುತ್ತವೆ. ಬೆಂಗಳೂರಿನಿಂದ ಹೈದರಾಬಾದ್ ಮೂಲಕ ಎನ್ಎಚ್ 7 ಮತ್ತು ಎನ್ಎಚ್ 9 ಮಾರ್ಗವಾಗಿ ಹದಿನಾರು ಗಂಟೆಗಳಲ್ಲಿ ಬೀದರ ತಲುಪಬಹುದು. ಹೈದರಾಬಾದಿನ ಇಮಲಿಬನ್ ಬಸ್ ನಿಲ್ದಾಣದಿಂದ ಪ್ರತಿ 15 ನಿಮಿಷಗಳಿಗೊಮ್ಮೆ ಪ್ಲಾಟ್ ಫಾರ್ಮ್ ನಂ 36 ರಿಂದ ಬೀದರಿಗೆ ಹೊರಡುತ್ತವೆ. ಬೆಂಗಳೂರಿನಿಂದ ಬಳ್ಳಾರಿ ಹಾಗೂ ಕಲಬುರಗಿ ಮಾರ್ಗವಾಗಿ ಇಪ್ಪತ್ತು ಗಂಟೆಗಳ ಪ್ರಯಾಣದ ಮೂಲಕ ಬೀದರ ತಲುಪಬಹುದು.