ಗುರುನಾನಕ್ ಝೀರಾ, ಬೀದರ
ಗುರುದ್ವಾರ ಬೀದರ ಸಿಖ್ಖರ ಪವಿತ್ರ ಸ್ಥಳಗಳಲ್ಲೊಂದಾಗಿದೆ. ಈ ಸ್ಥಳವು ಪ್ರತಿ ವರ್ಷವೂ ದೇಶದ ನಾನಾ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ನವೆಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ಆಗಮಿಸುತ್ತಾರೆ. ಸ್ಥಳೀಯ ಐತಿಹ್ಯದ ಪ್ರಕಾರ ಗುರುನಾನಕರು ಇಲ್ಲಿಗೆ ಭೇಟಿಕೊಟ್ಟಾಗ ಜನರು ಕ್ಷಾಮದಿಂದ ಬಳಲುತ್ತಿದ್ದರು. ಸ್ಥಳೀಯರ ಅಳಲನ್ನು ಆಲಿಸಿದ ಗುರುನಾನಕರು ಪವಾಡದ ಮೂಲಕ ತಮ್ಮ ಕಾಲಿನಿಂದ ಕಲ್ಲನ್ನು ಸರಿಸುವುದರೊಂದಿಗೆ ಕೆಂಪುಬಂಡೆಯೊಳಗಿನಿಂದ ನೀರು ಚಿಮ್ಮುವಂತೆ ಮಾಡಿದರು. ಈ ದಿನದವರೆಗೂ ಸ್ಫಟಿಕಸ್ಪಷ್ಟ ನೀರು ಹರಿಯುತ್ತಿದೆ. ಈ ನೀರನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳನ್ನು ಗುಣಮುಖವಾಗುವುದೆಂಬ ನಂಬಿಕೆಯಿದೆ.