ಗುರುನಾನಕ್ ಝಿರಾ, ಬೀದರ
ಗುರುದ್ವಾರ ಬೀದರ ಸಿಖ್ಖರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಪ್ರತಿ ವರ್ಷ ಈ ಸಳ್ಥವು ದೇಶದ ಎಲ್ಲಾ ಭಾಗಗಳಿಂದ ವಿಶೇಷವಾಗಿ ನವೆಂಬರ್ ಮತ್ತು ಮಾರ್ಚ್ ತಿಂಗಳುಗಳಲ್ಲಿ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ . ದಂತಕಥೆಯ ಪ್ರಕಾರ ಭೂಮಿ ಬರಗಾಲದ ಹಿಡಿತದಲ್ಲಿದ್ದಾಗ ಸಂತ ಗುರುನಾನಕ್ ಇಲ್ಲಿಗೆ ಭೇಟಿ ನೀಡಿದರು, ಗುರುಗಳು ಸ್ಥಳೀಯರ ಕೋರಿಕೆಯ ಮೇರೆಗೆ ಪವಾಡವನ್ನು ಮಾಡಿದರು ಮತ್ತು ಕೆಂಪುಗಲ್ಲು ಬೆಟ್ಟದಿಂದ ನೀರಿನ ಬುಗ್ಗೆ ಸ್ಪೋಟಗೊಂಡಿತು. ಈ ದಿನದವರೆಗೂ ಕೆಂಪುಗಲ್ಲು ಬಲೆಯಿಂದ ಸ್ಪಟಿಕ ಶುದ್ದ ನೀರು ಹರಿಯುತ್ತದೆ. ಈ ನೀರನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ.