ಸಕಾಲ ಸೇವೆಗಳು
ಕರ್ನಾಟಕ ರಾಜ್ಯದಲ್ಲಿನ ನಾಗರಿಕರಿಗೆ ಗೊತ್ತುಮಾಡಿದ ಕಾಲಮಿತಿಯೊಳಗೆ ಸೇವೆಗಳು ವಿತರಿಸಲು ಈ ಅಧಿನಿಯಮವನ್ನು ಜಾರಿಗೊಳಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ, ಅನುಸೂಚಿಯಲ್ಲಿ ಉಲ್ಲೇಖಿಸಿದ ನಾಗರಿಕ ಸಂಬಂಧಿತ ಸೇವೆಗಳಿಗಾಗಿ ನಿಗದಿತ ಕಾಲದೊಳಗೆ ನಾಗರಿಕರಿಗೆ ಸೇವಾ ಖಾತರಿಯನ್ನು ಒದಗಿಸಲು ೨೦೧೧ನೇ ಡಿಸೆಂಬರ್ ನಲ್ಲಿ ಕರ್ನಾಟಕ ವಿಧಾನಮಂಡಲವು ಸರ್ವಾನುಮತದಿಂದ ಅಂಗೀಕರಿಸಿದ ಒಂದು ಅಧಿನಿಯಮ ಇದಾಗಿದೆ.
ಈ ಅಧಿನಿಯಮವು, ಅಧಿನಿಯಮದಲ್ಲಿ ಹೇಳಲಾದ ನಾಗರಿಕ ಸೇವೆಗಳನ್ನು ನಿಗದಿತ ಕಾಲದೊಳಗೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನೀವು ಸೇವೆಯನ್ನು ಕೋರಿದಾಗ, ನೀವು ಸಕಾಲ ಸಂಖ್ಯೆಯೊಂದಿಗೆ ರಸೀತಿ ಅಥವಾ ಹಿಂಬರಹವನ್ನು ಪಡೆಯುತ್ತೀರಿ. ಇದು, ಸೇವೆಗಾಗಿನ ನಿಮ್ಮ ಕೋರಿಕೆಯನ್ನು ನಿರ್ದಿಷ್ಟಪಡಿಸಿದ ದಿನಗಳೊಳಗಾಗಿ ಪರಿಶೀಲಿಸಲಾಗುತ್ತದೆ ಎಂಬ ಭರವಸೆಯನ್ನು ಖಚಿತಪಡಿಸುತ್ತದೆ. ಸಕಾಲ ಸಂಖ್ಯೆಯೊಂದಿಗೆ ನೀವು ಈ ವೆಬಸೈಟನಲ್ಲಿ ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ತಿಳಿಯಬಹುದು. ನೀವು ನಿಮ್ಮ ಮೊಬೈಲ್ ನಿಂದ ಎಸ್ಎಂಎಸ್ ಕಳುಹಿಸುವುದರ ಮೂಲಕವೂ ಸಹ ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಒಂದು ವೇಳೆ, ನಿಮ್ಮ ಅರ್ಜಿಯು ತಿರಸ್ಕೃತವಾದರೆ ಅಥವಾ ಸೇವೆಯನ್ನು ನಿಗದಿತ ಕಾಲದೊಳಗೆ ಒದಗಿಸದಿದ್ದರೆ, ನೀವು ನಿಮ್ಮ ಕುಂದುಕೊರತೆಗಳ ಪರಿಹಾರಕ್ಕಾಗಿ ಮುಂದಿನ ಅಧಿಕಾರಿಗೆ ಒಂದು ಅಪೀಲನ್ನು ಸಲ್ಲಿಸಬಹುದು.
ಸಕಾಲ ವೆಬಸೈಟಲ್ಲಿ ನೀವು ಸಕಾಲ ಅಧಿನಿಯಮದ ಬಗ್ಗೆ ಮಾಹಿತಿ, ಇಲಾಖೆಗಳ ಬಗ್ಗೆ ಮಾಹಿತಿ ಮತ್ತು ಈ ಪ್ರತಿಯೊಂದು ಇಲಾಖೆಗಳಲ್ಲಿ ಒದಗಿಸುವ ಸೇವೆಗಳು ಮತ್ತು ಸೇವೆಗಾಗಿನ ಕೋರಿಕೆಯನ್ನು ಪರಿಶೀಲಿಸಲು ರೂಪಿಸಿದ ನಮೂನೆಗಳು ಮತ್ತು ಕಾರ್ಯವಿಧಾನದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ನೀವು, ನಿಮ್ಮ ಅರ್ಜಿಯನ್ನು ಸಲ್ಲಿಸಿದ ಸಮಯದಲ್ಲಿ ನಿಮಗೆ ನೀಡಿದಂಥ ಸಕಾಲ ಸಂಖ್ಯೆಯ ಸಹಾಯದಿಂದ ನಿಮ್ಮ ಸೇವಾ ಕೋರಿಕೆಯ ಪರಿಸ್ಥಿತಿಯನ್ನು ಗುರುತಿಸಬಹುದು.
ಭೇಟಿ: http://www.sakala.kar.nic.in/
ಸಂಭಂದಪಟ್ಟ ಇಲಾಖೆಯ ಜಿಲ್ಲಾ ಕಛೇರಿ
ಸಂಭಂದಪಟ್ಟ ಇಲಾಖೆಯ ಜಿಲ್ಲಾ ಕಛೇರಿ
ಸ್ಥಳ : ಸಂಭಂದಪಟ್ಟ ಇಲಾಖೆಯ ಜಿಲ್ಲಾ ಕಛೇರಿ | ನಗರ : ಬೀದರ್ | ಪಿನ್ ಕೋಡ್ : 585401