ಕಾರಂಜಾ ಅಣೆಕಟ್ಟು
ಕಾರಂಜಾ ನೀರಾವರಿ ಯೋಜನೆಯು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ಗೋದಾವರಿ ಜಲಾಯನ ಪ್ರದೇಶದಲ್ಲಿ ಮಾಂಜ್ರಾ ನದಿಯ ಉಪನದಿಯಾದ ಕಾರಂಜಾ ನದಿಗೆ ಅಡ್ಡಲಾಗಿ ಇದೆ. ಇದು ಬಲ ಮತ್ತು ಎಡದಂಡೆಗಳೆರಡರಲ್ಲೂ ಕಾಲುವೆಗಳನ್ನು ಹೊಂದಿದೆ. ಬಲದಂಡೆ ಕಾಲುವೆಯ ಒಟ್ಟು ಉದ್ದ 131 ಕಿಮೀ ಮತ್ತು ಎಡದಂಡೆ ಕಾಲುವೆಯ ಉದ್ದ 31ಕಿಮೀ. ಈ ಯೋಜನೆಯು ಭಾಲ್ಕಿ ಮತ್ತು ಬೀದರ ತಾಲೂಕುಗಳಲ್ಲಿ 29227 ಹೆಕ್ಟೇರ್ ಪ್ರದೇಶಕ್ಕೆ (ಅಅಂ) ನಿರಾವರಿಯನ್ನು ಬಲ ಮತ್ತು ಎಡದಂಡೆಗಳ ಎರಡೂ ಕಾಲುವೆಗಳಿಂದ ಹಾಗೂ ಮುಂದಡ ಮತ್ತು ಹಿಂದಡದ ಲಿಫ್ಟ್ ನೀರಾವರಿ ಯೋಜನೆಗಳಿಂದ ಕಲ್ಪಿಸುತ್ತದೆ.






















